ನಾನು ಗೆಲ್ಲಬಹುದೇ??? ವ್ಯಕ್ತಿತ್ವ ವಿಕಸನದ ಪುಸ್ತಕವು ಜೀವನವನ್ನು ಸೋಲಿನ ದಿಕ್ಕಿನಿಂದ ಗೆಲುವಿನ ದಿಕ್ಕಿನ ಕಡೆಗೆ ಓದುಗರನ್ನು ಸೆಳೆಯುವ ಲೇಖನಗಳಾಗಿವೆ. ನಮ್ಮ ಸುತ್ತ ಮುತ್ತ ನಡೆಯುವ ಘಟನೆಗಳು ಸಾಮಾಜಿಕವಾಗಿ ನಮ್ಮನ್ನು ಚಿಂತಿತರಾಗಿ ಮಾಡುತ್ತವೆ. ಅದರಲ್ಲಿ ಓದುವುದು ಜ್ಞಾಪಕ ಹಣ ಗೆಲುವು ದೇವರು ಮತ್ತು ಜೀವನದ ಮೌಲ್ಯ ಇಂತಹ ವಿಷಯಗಳು ನಮ್ಮನ್ನು ಬಹಳ ಕಾಡುತ್ತವೆ. ಬದುಕಿನ ಕಷ್ಟ ಸೋಲುಗಳು ನಮ್ಮನ್ನು ಸೋಲಿನ ಸರಪಳಿಗೆ ಸಿಲುಕಿಸಿರುತ್ತವೆ ಇಂತಹ ಸರಪಳಿಯಿಂದ ಹೊರಬರುವುದು ಹೇಗೆ ನಾನು ನಿಜವಾಗಿಯೂ ಗೆಲ್ಲಬಲ್ಲನೆ??? ಎಂಬ ಆತಂಕ ಎಲ್ಲರಲ್ಲೂ ಮೂಡಿರುತ್ತದೆ. ಇಂತಹ ಸೋಲಿನ ಕಹಿಗೆ ಉತ್ತರವೇ ನಾನು ಗೆಲ್ಲಬಹುದೇ???. ಇವರು ಬರೆದ 'ಹೇ ಹೃದಯ ನೀನು: ಮತ್ತು 'ನೀನೇ ನನ್ನ ಜೀವ 'ಎಂಬ ಸಾಹಿತ್ಯದ ಗೀತೆಗಳನ್ನು ದರ್ಶು ಮ್ಯೂಸಿಕ್ ಸಂಸ್ಥೆಯವರು ರೆಕಾರ್ಡ್ ಮಾಡಿ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆಗೊಂಡಿರುತ್ತವೆ. ಕವಿಗಳು ತಮ್ಮ ಕವನಗಳನ್ನು ವಿಡಿಯೋ ತುಣುಕುಗಳನ್ನಾಗಿ ಮಾಡಿ ಕನಸುಗಳ ಪಿಸುಮಾತು ಎಂಬ ಯೂಟ್ಯೂಬ್ ಚಾನೆಲ್ ಮೂಲಕ ಜನಗಳಿಗೆ ತಮ್ಮ ಕವನಗಳನ್ನು ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ.
Piracy-free
Assured Quality
Secure Transactions
Delivery Options
Please enter pincode to check delivery time.
*COD & Shipping Charges may apply on certain items.