ಯಾನ್ ರಫ್-ಓಹರ್ನ್ ಅವರು ಡಚ್ ಭಾಷೆಯಲ್ಲಿ ಬರೆದ ಈ ಮನಕಲಕುವ ಆತ್ಮಕತೆಯನ್ನು ಅರುಣ್ ಅವರು ಕನ್ನಡಕ್ಕೆ ತಂದಿದ್ದಾರೆ. ಈ ಕೃತಿಯ ಕುರಿತು ವಿಮರ್ಶಕ ಮತ್ತು ಸಾಂಸ್ಕೃತಿಕ ಚಿಂತಕ ರಹಮತ್ ತರೀಕೆರೆ ಅವರು ಈ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಾರೆ:ಈಚೆಗೆ ನಾನು ಓದಿದ ಅಂತಃಕರಣ ಕಲಕುವ ಬರೆಹವಿದು. ಎರಡನೇ ಮಹಾಯುದ್ಧದಲ್ಲಿ ಜಪಾನಿ ಸೈನಿಕರ ಲೈಂಗಿಕದಾಸ್ಯಕ್ಕೆ ತಳ್ಳಲ್ಪಟ್ಟ ಡಚ್ ಮಹಿಳೆಯೊಬ್ಬಳು ಲೋಕಕ್ಕಂಜಿ ತನ್ನೆದೆಯಲ್ಲಿ ಅಡಗಿಸಿಕೊಂಡಿದ್ದ ಅಪಮಾನ ನೋವು ಹಿಂಸೆಯ ಲಾವರಸದಂತಹ ದಾರುಣ ಅನುಭವವನ್ನು ಅರ್ಧಶತಮಾನದ ಬಳಿಕ ಬಿಚ್ಚಿಡುತ್ತಾಳೆ. ಯುದ್ಧದಲ್ಲಿ ಗೆದ್ದವರು ಲೂಟಿ ಮಾಡುವುದು ಮತ್ತು ಸೆರೆಸಿಕ್ಕ ಸ್ತ್ರೀಯರನ್ನು ಲೈಂಗಿಕವಾಗಿ ದುರ್ಬಳಕೆ ಮಾಡುವುದು ಜಗತ್ತಿನಾದ್ಯಂತ ಸೈನಿಕ ಸಂಸ್ಕೃತಿಯ ಭಾಗವಾಗಿದೆ. ಈ ದೌರ್ಜನ್ಯಕ್ಕೆ ನಮ್ಮವರು-ಅನ್ಯರು ಎಂತೇನಿಲ್ಲ. ಕೆಲವು ವರ್ಷಗಳ ಹಿಂದೆ ಈಶಾನ್ಯ ಭಾರತದ ಮಹಿಳೆಯರು ಬೆತ್ತಲಾಗಿ ಸೈನಿಕ ಕಛೇರಿಗಳ ಮುಂದೆ ನಿಂತು ಮಾಡಿದ ಪ್ರತಿಭಟನೆ ಇದಕ್ಕೆ ಸಾಕ್ಷಿ. ಈ ಆತ್ಮಕತೆಯು ಯುದ್ಧಗಳ ಸೋಲು-ಗೆಲುವಿನ ಲೆಕ್ಕಾಚಾರಗಳಲ್ಲಿ ನಗಣ್ಯವಾಗುಳಿವ ಜನರ ನೋವನ್ನು ಹಿಡಿದಿಟ್ಟುಕೊಡುತ್ತ ಯುದ್ಧಸಂಸ್ಕೃತಿಯ ಬಗ್ಗೆಯೇ ಹೇವರಿಕೆ ಹುಟ್ಟಿಸುತ್ತದೆ. ವೈರುಧ್ಯವೆಂದರೆ ಮಾನವೀಯ ತುಡಿತ ಮತ್ತು ನಾಗರಿಕ ಹಕ್ಕುಪ್ರಜ್ಞೆಯಿಂದ ಹುಟ್ಟಿರುವ ಈ ಕಥನದಲ್ಲಿ ಯೂರೋಪಿಯನರು ಏಶ್ಯಾ ದೇಶಗಳನ್ನು ಅವುಗಳ ಇಚ್ಛೆಗೆ ವಿರುದ್ಧವಾಗಿ ಆಕ್ರಮಿಸಿಕೊಂಡಿರುವುದು ತಪ್ಪೆಂಬ ನಿಲುವು ಇಲ್ಲದಿರುವುದು. A Kannada book in Chanda Pustaka / ಛಂದ ಪುಸ್ತಕದ ಪ್ರಕಟಣೆ
Piracy-free
Assured Quality
Secure Transactions
Delivery Options
Please enter pincode to check delivery time.
*COD & Shipping Charges may apply on certain items.