Bayalarasi Horatavalu
Kannada

About The Book

ಛಂದ ಪುಸ್ತಕ ಬಹುಮಾನ ಪಡೆದ ಕೃತಿ. ಈ ಹಸ್ತಪ್ರತಿಯನ್ನು ಬಹುಮಾನಕ್ಕೆ ಆಯ್ಕೆ ಮಾಡಿದ ಡಾ. ತಾರಿಣಿ ಶುಭದಾಯಿನಿ ಅವರು ಕೃತಿಯ ಕುರಿತು ಹೀಗೆ ಹೇಳುತ್ತಾರೆ:ಛಾಯಾ ಭಟ್ ಅವರ ಕತೆಗಳು ಸಮಕಾಲೀನ ಸಮಾಜದ ಸಂಸಾರ ಸಂಬಂಧಗಳನ್ನು ಒಡಲಲ್ಲಿಟ್ಟುಕೊಂಡ ಕತೆಗಳು. ಇವು ಮಡಂಬ ಪತ್ತನ ದ್ರೋಣಾಮುಖಗಳ ಸಂಚಾರವನ್ನು ಉದ್ದೇಶಿಸಿ ಹೊರಟ ಮಹತ್ವಾಕಾಂಕ್ಷಿ ಕತೆಗಳಲ್ಲವಾದರೂ ದೂರದಲ್ಲೆಲ್ಲೊ ಸುನಾಮಿ ಎದ್ದರೆ ಅದರ ಪರಿಣಾಮೀ ಅಲೆಗಳು ಅದರ ಪ್ರತಿನಾಡಿನಲ್ಲೆಲ್ಲೊ ಕಂಪನ ಎಬ್ಬಿಸಿದಂತೆ ಪುಟ್ಟ ಜಗತ್ತಿನಲ್ಲೆ ಎದ್ದ ಅಲೆಗಳನ್ನು ಕಾಣುವಂಥವು. ಈ ‘ಕಾಣುವ’ ರೀತಿ ತನ್ನ ಕಣ್ಣಿನ ಸತ್ಯವನ್ನೆ ಅಂತಿಮ ಎಂದು ನಂಬುವ ರೀತಿಯಲ್ಲಿಲ್ಲ. ಸ್ತ್ರೀವಾದ ಪ್ರಾದೇಶಿಕತೆ ಜಾತಿ ವರ್ಗ ಮುಂತಾದ ಸಿದ್ಧಾಂತಗಳ ನೆಲೆಗಟ್ಟುಗಳನ್ನು ಬಳಸಿ ಹೇಳಬೇಕೆನ್ನುವ sಣಡಿಚಿಣegಥಿ ತಿಡಿiಣiಟಿg ಕೂಡಾ ಅಲ್ಲ. ಈ ಬಗೆಯ ಮಹತ್ವಾಕಾಂಕ್ಷೆಯ ಗುರಿಯಿರದ ಕತೆಗಳು ಏಕಾಂತದಲ್ಲಿ ಕೆಲವು ಮಾನವೀಯ ಪ್ರಶ್ನೆಗಳನ್ನು ಎತ್ತಬಲ್ಲವು. ಛಾಯಾ ಭಟ್ ಅವರ ಕತೆಗಳು ಸಮಕಾಲೀನ ಬರವಣಿಗೆಗಳಲ್ಲಿರುವ ಕೆಲವು ಚಹರೆಗಳನ್ನು ಬಿಟ್ಟುಕೊಟ್ಟಿವೆ. ಉದಾಹರಣೆಗೆ ಅವರಿಗೆ ಸ್ತ್ರೀವಾದಿ ನೆಲೆಯಲ್ಲಿ ಕಥೆ ಕಟ್ಟುವ ಅವಕಾಶವಿತ್ತಾದರೂ ಅವರು ಅದನ್ನು ಬಿಟ್ಟುಕೊಟ್ಟು ಕಥೆ ಹೇಳುವ ರೀತಿಯನ್ನು ರೂಢಿಸಿಕೊಂಡಿದ್ದಾರೆ. ಜಾತಿ. ಲಿಂಗ ಮತ್ತು ವರ್ಗಗಳ ನೆಲೆಗಳಲ್ಲಿ ನಿಂತು ಲೋಕ ನೋಡುವುದು ಒಂದು ಬಗೆಯ ಜಾಡನ್ನು ನಿರ್ಮಿಸುತ್ತದೆ. ಅದು ಹಾಗೆ ಆಗಬೇಕೆಂದೇ ಆ ಅಸ್ಮಿತೆಗಳು ಮುನ್ನೆಲೆಗೆ ಬಂದಿದ್ದು. ಆದರೆ ಕ್ರಮೇಣ ಈ ಅಸ್ಮಿತೆಗಳು ಸ್ಥಿರಗೊಳ್ಳುತ್ತಾ ಜಡವಾಗತೊಡಗಿದವು. ಉದ್ದೇಶಪೂರ್ವಕವಾಗಿ ಐಡೆಂಟಿಟಿಗಳನ್ನು ಹೇರಿಕೊಳ್ಳುವುದು ಕತೆಗೆ ತೊಡಕಾಗುತ್ತದೆ. ಹೊಸ ತಲೆಮಾರಿನ ಕೆಲವು ಲೇಖಕ/ಲೇಖಕಿಯರಾದರೂ ತಂತಮ್ಮ ಅಸ್ಮಿತೆಗಳ ಭಾರಗಳನ್ನು ಒತ್ತರಿಸಿ ಏನಾದರೂ ಹೇಳಬೇಕು ಎನ್ನುವ ತಹತಹ ಹೊಂದಿದ್ದಾರೆ. ಛಾಯಾ ಭಟ್ ಅವರಂತಹ ಹೊಸ ತಲೆಮಾರಿನ ಲೇಖಕಿ ಈ ದಿಸೆಯಲ್ಲಿ ಹೆಜ್ಜೆಯಿಟ್ಟಿದ್ದಾರೆ ಎನ್ನಿಸುತ್ತದೆ. ಇದರಿಂದ ಪೊಲಿಟಿಕಲಿ ಕರೆಕ್ಟ್ ಅನ್ನಿಸುವ ಧಾಟಿಯಿಂದಲೂ ಹೊರಬರಲು ಸಾಧ್ಯವಾಗಿದೆ.A kannada book from Chanda Pustaka / ಛಂದ ಪುಸ್ತಕದ ಪ್ರಕಟಣೆ
Piracy-free
Piracy-free
Assured Quality
Assured Quality
Secure Transactions
Secure Transactions
Delivery Options
Please enter pincode to check delivery time.
*COD & Shipping Charges may apply on certain items.
Review final details at checkout.
downArrow

Details


LOOKING TO PLACE A BULK ORDER?CLICK HERE