ದೃಕ್-ದೃಶ್ಯ-ವಿವೇಕ ಎಂಬ ಸುಪ್ರಸಿದ್ಧ ಪಠ್ಯವು ಹೇಳುವ ಪ್ರಕಾರ ನಾವೆಲ್ಲ ಹಲವು ಕಣ್ಣುಗಳಲ್ಲಿ ನೋಡುತ್ತೇವೆ: ನಮ್ಮಲ್ಲಿ ಹಲವರಿಗೆ ಕನ್ನಡಕವು ಮೊದಲನೆಯ ಕಣ್ಣಾದರೆ ಅದು ತೋರಿಸಿದ್ದನ್ನು ನೋಡುವುದು ಅದರೊಳಗಿನ ಕಣ್ಣು. ಮತ್ತು ಆ ಕಣ್ಣು ಕಂಡಿದ್ದನ್ನು ಕಾಣುವುದು ಮನಸ್ಸು ಮತ್ತು ಆ ಮನಸ್ಸನ್ನು ಕಾಣುವುದು ಪ್ರಜ್ಞೆ. ಕರ್ಕಿ ಕೃಷ್ಣಮೂರ್ತಿಯವರ ಈ ಬರಹಗಳಲ್ಲಿ ನಮ್ಮೊಳಗೇ ಅಂತರ್ಗತವಾಗಿರುವ ಇಂಥ ಬಹುನೋಟಗಳ ಬೆರಕೆ ಕಾಣಸಿಗುತ್ತದೆ. ಇಂಥ ಹಲವು ಕಾಣ್ಕೆಗಳನ್ನು ಈ ಪ್ರಬಂಧಗಳು ಸಮಾನಾಂತರವಾಗಿ ಹೆಣೆಯುತ್ತ ಈ ವಿಭಿನ್ನ ಕಣ್ಣುಗಳ ಇತಿಮಿತಿ ಗಳೆಲ್ಲವನ್ನೂ ಸಮಾನ ಅವಧಾರಣೆಯಿಂದ ನಮ್ಮ ಮುಂದಿರಿಸುತ್ತ ನಮಗೆ ದಕ್ಕುವ ನಿಜವನ್ನು ಹುಡುಕಿಕೊಳ್ಳುವ ಅವಕಾಶ ಮಾಡಿಕೊಡುತ್ತವೆ. ಹಾಗಾಗಿ ಕರ್ಕಿಯವರ ಬರಹಗಳಿಗೆ ಅವರ ನೋಟದ ಮಿತಿಯನ್ನೂ ಮೀರಿದ ವ್ಯಾಪ್ತಿ ಒದಗಿದೆಯೆಂಬುದು ಈ ಪ್ರಬಂಧಗಳ ಒಂದು ಹೆಗ್ಗಳಿಕೆಯಾದರೆ ಇವುಗಳನ್ನೋದುತ್ತ ನಾವು ನಮ್ಮದೇ ಪ್ರಬಂಧಗಳನ್ನು ಹೆಣೆದುಕೊಳ್ಳಬಹುದು ಎಂಬುದು ಇನ್ನೊಂದು ಅನುಕೂಲ. ಇವತ್ತಿನ ಕಾಲವೇ ಇಂಥ ನೋಟಗಳ ಬಹುತ್ವವನ್ನು ಬೇಡುತ್ತಿದೆಯೋ ಎನ್ನಿಸುವಷ್ಟು ಈ ಬರಹಗಳು ತಾವು ನೋಡುವ ಸಂಗತಿಗಳೊಂದಿಗೆ ಸಮಾಗಮಿಸಿವೆ.- ಕೆ.ವಿ. ಅಕ್ಷರ A Kannada book from Chanda Pustaka / ಛಂದ ಪುಸ್ತಕದ ಪ್ರಕಟಣೆ
Piracy-free
Assured Quality
Secure Transactions
Delivery Options
Please enter pincode to check delivery time.
*COD & Shipping Charges may apply on certain items.