EVEREST (Kannada)
Kannada

About The Book

1996ರ ಮೇ ತಿಂಗಳಲ್ಲಿ ಎವರೆಸ್ಟ್ ಪರ್ವತಾರೋಹಣ ತಂಡವೊAದರಲ್ಲಿ ಭಾಗವಹಿಸಿ ಲೇಖನವೊಂದನ್ನು ಬರೆಯುವುದಕ್ಕಾಗಿ ‘ಔಟ್‌ಸೈಡ್’ ಪತ್ರಿಕೆ ನನ್ನನ್ನು ನೇಪಾಳಕ್ಕೆ ಕಳುಹಿಸಿತು. ಈ ತಂಡವು ಪ್ರಸಿದ್ಧ ಮಾರ್ಗದರ್ಶಕನಾದ ರಾಬ್ ಹಾಲ್ ಎನ್ನುವ ನ್ಯೂಜಿಲೆಂಡಿನ ಪರ್ವತಾರೋಹಿಯ ನೇತೃತ್ವದಲ್ಲಿ ನಡೆಯುತ್ತಿತ್ತು. ಮೇ 10ನೇ ತಾರೀಖಿನಂದು ನಾನು ಎವರೆಸ್ಟ್ ಪರ್ವತದ ತುದಿಯನ್ನು ತಲುಪಿದೆನಾದರೂ ಈ ಸಾಧನೆಯು ಇಡೀ ತಂಡವು ಒಂದು ದೊಡ್ಡ ದುರಂತಕ್ಕೆ ಬೆಲೆಯನ್ನು ತೆತ್ತುವುದರೊಂದಿಗೆ ಬಂದಿತ್ತು.ನನ್ನ ತಂಡದ ಐವರು ಸದಸ್ಯರು ಪರ್ವತದ ತುದಿಯನ್ನು ತಲುಪಿದೆವಾದರೂ ಮುನ್ಸೂಚನೆಯನ್ನೇ ಕೊಡದೆ ಅಪ್ಪಳಿಸಿದ ಒಂದು ಕರಾಳ ಬಿರುಗಾಳಿಗೆ ಸಿಕ್ಕು ರಾಬ್ ಹಾಲ್ ಸೇರಿದಂತೆ ನಾಲ್ವರು ಹಿಮದಲ್ಲಿ ಅಸುನೀಗಿದರು. ನಾನು ಬೇಸ್ ಕ್ಯಾಂಪ್‌ಗೆ ಇಳಿದು ಬರುವ ಹೊತ್ತಿಗಾಗಲೇ ನಾಲ್ಕು ಪರ್ವತಾರೋಹಣ ತಂಡಗಳ ಒಂಬತ್ತು ಜನ ಸತ್ತು ಹೋದರು. ತಿಂಗಳ ಕೊನೆ ತಲುಪುವುದರಲ್ಲಿ ಇನ್ನೂ ಮೂರು ಜೀವಗಳು ಸಾವನ್ನಪ್ಪಲಿದ್ದವು.ನಾನು ಗೌರವಿಸುವ ಬಹಳಷ್ಟು ಲೇಖಕರು ಮತ್ತು ಸಂಪಾದಕರು ಇಷ್ಟೊಂದು ಬೇಗನೆ ಈ ಪುಸ್ತಕವನ್ನು ಬರೆಯುವುದು ಬೇಡವೆಂದು ಸಲಹೆ ಕೊಟ್ಟಿದ್ದರು; ಆದರೆ ನಾನು ಮಾತ್ರ ಅದನ್ನು ನಿರ್ಲಕ್ಷಿಸಿದೆ - ಏಕೆಂದರೆ ಪರ್ವತದಲ್ಲಿ ನಡೆದ ಘಟನೆಗಳು ನನ್ನ ಬದುಕಿನ ಧೈರ್ಯವನ್ನು ನಿರಂತರವಾಗಿ ತಿಂದುಹಾಕುತ್ತಿದ್ದವು. ಈ ಪುಸ್ತಕವನ್ನು ಬರೆಯುವುದರಿಂದ ಎವರೆಸ್ಟ್ ಪರ್ವತವನ್ನು ನನ್ನ ಬದುಕಿನಿಂದ ದೂರ ತಳ್ಳುವುದಕ್ಕೆ ಸಾಧ್ಯವಾಗುತ್ತದೆಂದು ನಾನು ಭಾವಿಸಿದೆ.ಆದರೆ ಅದು ಸಾಧ್ಯವಾಗಿಲ್ಲ.- ಲೇಖಕ ಜಾನ್ ಕ್ರಾಕೌರ್A book in Kannada by Chanda Pustaka / ಛಂದ ಪುಸ್ತಕದ ಪ್ರಕಟಣೆ
Piracy-free
Piracy-free
Assured Quality
Assured Quality
Secure Transactions
Secure Transactions
Delivery Options
Please enter pincode to check delivery time.
*COD & Shipping Charges may apply on certain items.
Review final details at checkout.
downArrow

Details


LOOKING TO PLACE A BULK ORDER?CLICK HERE