*COD & Shipping Charges may apply on certain items.
Review final details at checkout.
₹284
₹320
11% OFF
Paperback
All inclusive*
Qty:
1
About The Book
Description
Author
ಜೀವನದಲ್ಲಾಗಲಿ ಪ್ರಯಾಣದಲ್ಲಾಗಲಿ ನಮ್ಮ ಸ್ವಶಕ್ತಿಯ ಮೇಲೆ ನಮಗೆ ನಂಬಿಕೆ ಇರಬೇಕು ಅದುಬಿಟ್ಟು ಏನುಮಾಡಿದರೆ ಏನಾಗುತ್ತ್ತೊ ಎನ್ನುವ ವ್ಯರ್ಥ ಯೋಚನೆಗಳನ್ನು ಮಾಡುವುದರಿಂದ ಯಾವುದೇ ಮೇಲು ಜರುಗುವುದಿಲ್ಲ. ಅವರ ಯೋಚನೆಗಳಲ್ಲಾಗಲಿ ಕನಸುಗಳಲ್ಲಾಗಲಿ ಮನೆಯ ಸುತ್ತಮುತ್ತಲಿನ ಪ್ರದೇಶಗಳನ್ನು ಬಿಟ್ಟು ಯೋಚಿಸಲಾಗದ ಬದುಕುಕುಗಳು ಹಸಿವಾದರೆ ಒಂದು ತುತ್ತು ಹೊಟ್ಟೆಗೆ ಅನ್ನ ಹಾಕಲು ಸಹಾ ಆಗದೇ ಇರುವವರು ಎವರೆಸ್ಟ್ ಎನ್ನುವ ಪದವನ್ನು ಉಚ್ಛರಿಸಲು ಸಹಾ ಧೈರ್ಯ ಮಾಡಲು ಆಗದೇ ಇರುವವರು. ಎವರೆಸ್ಟ್ ಶಿಖರವನ್ನೇ ಏರಿದರಲ್ಲವೇ ಇದು ಎಂತಹ ಸಾಧನೆ. ತಮ್ಮ ಕನಸುಗಳನ್ನು ನೆನಸುಮಾಡಿಕೊಳ್ಳಲು ಎಲ್ಲರಿಗೂ ಸಾಧ್ಯವೇ ಸರಿಯಾದ ಊಟ ವಾಸವಿರಲು ಒಂದು ಗೂಡು ಇಲ್ಲದ ತಾಂಡಾದ ಗಿರಿಜನ ಹುಡುಗಿಯ ಹೃದಯದ ಕೋಣೆಗಳಲ್ಲಿ ಶಿಖರವನ್ನು ಮೀರಿದ ಗುರಿಯನ್ನಿಟ್ಟುಕೊಂಡಿದ್ದರು. ತನ್ನ ಬಡತನವನ್ನು ಎವರೆಸ್ಟ್ ಶಿಖರಕ್ಕೆ ಉಡುಗೊರೆಯಾಗಿ ನೀಡಲು ಬಯಸಿದ್ದಳು. ಶತಮಾನಗಳಿಂದ ತನ್ನ ಜಾತಿಯನ್ನು ಆಳಿದ ಬಿಸಿಯ ಕಿರಣಗಳಿಗೆ ನೆರಳಾಗಿ ಎವರೆಸ್ಟ್ ಶಿಖರವನ್ನು ಚತ್ರಿಯ ತರ ನೆರಳಾಗಿ ಪರಿವರ್ತಿಸಲು ಪ್ರತಿಜ್ಞೆ ಮಾಡಿದಳು. ತನ್ನ ಬಡತನದ ಉಕ್ಕಿನ ಪಂಜರವನ್ನು ಸಂಕಲ್ಪ ಬಲದಿಂದ ಮುರಿದು ಅಷ್ಟ ದಿಕ್ಪಾಲಕರ ಕಿವಿಯಲ್ಲಿ ತನ್ನ ವಿಜಯದ ಡೋಲುಗಳ ನಾದವನ್ನು ಸಗೌರವವಾಗಿ ಕೇಳಿಸಿದಳು ಪೂರ್ಣ. ಪ್ರಯತ್ನಪಟ್ಟರೆ ಏನನ್ನಾದರೂ ಸಾಧಿಸಬಹುದು ಎಂದುತಿಳಿಸಲು ದಾರಿದೀಪದಂತೆ ಇತಿಹಾಸದಲ್ಲಿ ಬರೆದಿಡುವ ಹೆಸರು ಮಲಾವತ್ ಪೂರ್ಣ. ಈ ಜಗತ್ತಿಗೆ ಯಾರ ಹುಟ್ಟು ಹೊಸದಲ್ಲ ಯಾರ ಮರಣವೂ ಅಂತ್ಯವೂ ಅಲ್ಲ ನಮ್ಮೆಲ್ಲರ ಬದುಕುಗಳು ಸೃಷ್ಟಿಗೆ ಸಮಾನವೇ .ಚರಿತ್ರೆ ಸೃಷ್ಟಿಸುವ ತರಹಾ ಜೀವನವನ್ನ ಪರಿವರ್ತಿಸಲು ತಯಾರು ಮಾಡಕೋಬೇಕಾಗಿದ್ದು ನಾವೇ. ಜೀವನದ ದಾರಿಯಲ್ಲಿ ಪ್ರಯಾಣಿಸುವವರಿಗೆ ಧೈರ್ಯ ಸಾಹಸ ತಾಳ್ಮೆ ಇರಬೇಕು ಪ್ರತಿಯೊಂದು ಬದಲಾವಣೆ ನಿನ್ನ ಶ್ರದ್ಧೆಗೆ ಪ್ರತಿಸ್ಪಂದಿಸುತ್ತದೆ.