HALUMATA SAMSKRUTI-2 (Kannada)

About The Book

ಸಾಂಪ್ರದಾಯಿಕ ಆಕರಗಳ ವ್ಯಾಪಕ ಪರಿಶೀಲನೆ ಹಾಗೂ ಉಪಯೋಗದೊಡನೆ 2. ಪ್ರಸಕ್ತ ಸನ್ನಿವೇಶಗಳ ವಿಶ್ಲೇಷಣೆ ಕೈಕೊಂಡು ಸೈ ಅನ್ನಿಸಿಕೊಂಡವರು ಡಾ. ಎಸ್.ಬಿ. ಸಾಗಿ ಅರ್ಥೈಸಿ ಸರಳ ವಿವರಣೆಯೊಡನೆ ಆಯಾ ಸಂಶೋಧನ ವಸ್ತುವನ್ನು 5 ನಿರೂಪಿಸುವಲ್ಲಿ ಅವರು ಸಿದ್ಧಹಸ್ತರೆಂಬುದರಲ್ಲಿ ಎರಡು ಮಾತಿಲ್ಲ ಇನ್ನು ಕಾವ್ಯಾಂತರ್ಗತ ಸಾಂಸ್ಕೃತಿಕ ಅಂಶಗಳನ್ನು ಹಕ್ಕಿ ಸಾಂದರ್ಭಿಕವಾಗಿ ಪರಿಶೀಲನೆ ಗೊಳಪಡಿಸುವುದರಲ್ಲೂ ಅವರದು ವಿಮರ್ಶಾ ನೋಟವಷ್ಟೇ ಅಲ್ಲ ನಿರ್ಣಯ ಯುತವಾಗಿ ಸಾಧಿಸಬಲ್ಲ ಸಾಮರ್ಥ್ಯವೂ ಅವರಿಗೆ ಸಿದ್ದಿಸಿದೆ. ಒಟ್ಟು 25 ಸಂಪ್ರಬಂಧಗಳ ಗುಚ್ಛವಾಗಿ ಹೊರಬಂದಿರುವ ''ಹಾಲುಮತ ಸಂಸ್ಕೃತಿ-2 ಶಾಸನ- ಸಾಹಿತ್ಯ-ದಾಖಲೆ-ಕ್ಷೇತ್ರಕಾರ್ಯ ಮಾಹಿತಿಗಳ ನೆಲೆಯಲ್ಲಿ ಅನನ್ಯವಾಗಿ ಅನಾವರಣ ಗೊಂಡಿರುವುದು ಬೆರಗುಗೊಳಿಸುವ ಸಂಗತಿ. ಸಧ್ಯಕ್ಕೆ ಹಾಲುಮತ ಸಾಹಿತ್ಯ-ಸಂಸ್ಕೃತಿ ಸಂಘಟನೆಗಳ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿ ಸಮಾಜದ ಜಾಗೃತಿಗಾಗಿ ಕಾಳಜಿಯುಕ್ತವಾಗಿ ಪ್ರವರ್ತಿಸುತ್ತಿರುವವರಲ್ಲಿ ಇಂದು ಡಾ. ಎಫ್.ಟಿ.ಹಳ್ಳಿಕೇರಿಯವರು ಮುಂಚೂಣಿಯಲ್ಲಿರುವರೆಂಬುದಂತೂ ವಾಸ್ತವ. ಸಾಹಿತ್ಯ-ಸಂಸ್ಕೃತಿಗಳಲ್ಲಿ ಆಳವಾದ ವಿದ್ವತ್ ಪಡೆದಿರುವ ಡಾ. ಹಳ್ಳಿಕೇರಿಯವರು ಕುರುಬ ಸಮಾಜ ಮಾತ್ರವಲ್ಲದೆ ಇತರೆ ಸಮಾಜಗಳೊಡನೆ ಅದು ಹೊಂದಿರ ಬೇಕಾದ ಮಧುರ ಬಾಂಧವ್ಯದ ಬಗೆಗೂ ಚಿಂತನೆ ನಡೆಸಿರುವರು. ಅವರ ಇಲ್ಲಿಯ ಪ್ರಬಂಧಗಳೇ ಈ ಮಾತಿಗೆ ಉದಾಹರಣೆಯಂತಿವೆ. ಮುಖ್ಯವಾಗಿ ಈಗಿನ ಪರಿಸ್ಥಿತಿಯಲ್ಲಿ ಕರ್ನಾಟಕದ ಬುಡಕಟ್ಟು ಸಮುದಾಯಗಳ ಸಂಸ್ಕೃತಿ ಚಿಂತನೆಯ ಮಟ್ಟಿಗೆ ಡಾ. ಹಳ್ಳಿಕೇರಿಯವರ ಕೊಡುಗೆಯೂ ಅಮೂಲ್ಯವೆಂದು ಪರಿಗಣಿಸುವ ಅನಿವಾರ್ಯತೆ ಇರುವುದು ಸ್ಪಷ್ಟ ಅವರಿಗೆ ಯಶಸ್ಸನ್ನು ಹಾರೈಸುತ್ತೇನೆ ಪ್ರೊ. ಲಕ್ಷ್ಮಣ ತೆಲಗಾವಿ
Piracy-free
Piracy-free
Assured Quality
Assured Quality
Secure Transactions
Secure Transactions
Delivery Options
Please enter pincode to check delivery time.
*COD & Shipping Charges may apply on certain items.
Review final details at checkout.
downArrow

Details


LOOKING TO PLACE A BULK ORDER?CLICK HERE