ಯುದ್ಧ ವಲಸೆ ಮತ್ತು ಅದಮ್ಯ ಮಾನವ ಚೇತನವನ್ನು ಕುರಿತಾದ ಹೃದಯಸ್ಪರ್ಶಿ ಕಥನ. ಇಲ್ಲಿ ಕಗ್ಗತ್ತಲ ಕಾಲದಲ್ಲಿಯೂ ಭರವಸೆಯ ಬೆಳಕೊಂದು ಹೊಳೆಯುವ ಚಮತ್ಕಾರವಿದೆ. ಈ ಕಾದಂಬರಿ ಕಾಡುವ ಕತೆಯಾಗಿ ನಿಮ್ಮೊಳಗೆ ಉಳಿಯುತ್ತದೆ.-ವಿಕಾಸ್ ಸ್ವರೂಪ್(ಎಂಟು ಅಕಾಡೆಮಿ ಪ್ರಶಸ್ತಿಗಳನ್ನು ಗೆದ್ದ ‘ಸ್ಲಮ್‌ಡಾಗ್ ಮಿಲೇನಿಯರ್’ ಸಿನಿಮಾಗೆ ಪ್ರೇರಿತವಾದ Q&A ಪುಸ್ತಕದ ಲೇಖಕ)***ಯುದ್ಧವು ಏಕಶಿಲೆಯ ವಿಗ್ರಹವನ್ನು ಮತ್ತೆ ಜೋಡಿಸದಂತೆ ಸ್ಫೋಟಿಸುತ್ತದೆ. ಯುದ್ಧದ ನಂತರದ ದೇಶವು ಜೀವಂತವಾಗಿ ನಳನಳಿಸುತ್ತಿದ್ದ ಬದುಕಿನ ಛಿದ್ರ ಕಳೇಬರದಿಂದ ರೂಪುಗೊಂಡ ಕೊಲಾಜು. ಈ ಕಾದಂಬರಿ ಕಾಣಿಸಹೊರಟಿರುವುದೂ ಅಂಥದೇ ಸಂಕಟವನ್ನು. ಯುದ್ಧವನ್ನು ಹೇರಿದ ನೆಲದ ಜನರ ಹೊಯ್ದಾಟ ಅಸಹಾಯಕತೆ ಪಾಪಪ್ರಜ್ಞೆಗಳನ್ನು ಪುಟ್ಟ ಕಣ್ಣುಗಳ ಸಾಂದ್ರ ಭಾವಪ್ರಪಂಚದ ಮೂಲಕ ನಮ್ಮೊಳಗೆ ಹನಿಹನಿಯಾಗಿ ಬಸಿಯುತ್ತದೆ. ಈ ಕಾರಣಕ್ಕೇ ಮನುಷ್ಯಪ್ರಜ್ಞೆಯ ಮೂಲದಲ್ಲಿ ಬೇರೂರಿರುವ ಆರ್ದ್ರತೆ ಇಲ್ಲಿ ಸ್ಥಾಯಿಭಾವವಾಗಿದೆ. ಹಾಗಂತ ಇದು ನಮ್ಮನ್ನು ವೇದನೆಯಲ್ಲಿ ತೊಯ್ಯಿಸುವ ಕತೆಯಲ್ಲ. ದಟ್ಟವಾದ ವಿಷಾದವನ್ನು ಗೊರಟೆಯೊಳಗಿರಿಸಿಕೊಂಡೂ ಸಿಹಿಯಾದ ತಿರುಳ ಚರ್ಮ ಹೊದ್ದಿದೆ. ತಂತಿ ಕಿತ್ತು ಬಿದ್ದ ಏಕತಾರಿಯ ವಿಷಣ್ಣತೆಯ ನಡುವೆಯೂ ಜೀವಚೈತನ್ಯವ ಮೊಗೆಮೊಗೆದು ಉಣಿಸುತ್ತದೆ.ಕಟ್ಟು ಹಾಕಿಸಿದ ಫೋಟೋದ ಒಳಗೆ ತಟಸ್ಥಗೊಂಡುಬಿಟ್ಟಿದ್ದು ಕಾಲ ಮಾತ್ರವಲ್ಲ ವಯಸ್ಸು ಮೀರಿ ಯೋಚಿಸಬೇಕಾದ ಬಾಲರ ಮುಗ್ಧತೆಯ ನಾಶಕ್ಕೂ ಅಲ್ಲಿ ಜಾಗವಿದೆ. ಈ ಕಥಾವೃಕ್ಷದ ಟಿಸಿಲೊಂದನ್ನು ಕಿತ್ತು ನಮ್ಮೊಳಗೆ ನೆಟ್ಟರೆ ಸಾಕು ನೆಲಕಚ್ಚಿಕೊಳ್ಳುವ ’ಕಣ್ಣೀರುಮರ’ದ ರೆಂಬೆಗಳಂತೆ ಬೆಳೆಯತೊಡಗುತ್ತದೆ. ಲೈಟ್‌ಹೌಸಿನ ಮೇಲಿರುವ ನಿತಾಂತ ಮೌನವೇ ನೊಂದ ಟರ್ಕಿ ಜನಪದದ ಜೋಗುಳವಾಗಿ ಕಾದಂಬರಿಯುದ್ದಕ್ಕೂ ಚಾಚಿಕೊಂಡಿದೆ.-ಕಾವ್ಯಾ ಕಡಮೆA Kannada book from Chanda Pustaka / ಛಂದ ಪುಸ್ತಕದ ಪ್ರಕಟಣೆ
Piracy-free
Assured Quality
Secure Transactions
Delivery Options
Please enter pincode to check delivery time.
*COD & Shipping Charges may apply on certain items.