ಇದೊಂದು ವಿಚಿತ್ರ ಸ್ಥಿತಿ. ನೀವು ಹಲವು ದುಃಖಗಳಲ್ಲಿ ಸಿಲುಕಿದಾಗ ಯಾವ ಕಣ್ಣೀರು ಯಾವ ದುಃಖದ್ದೆಂದು ತಿಳಿಯುವುದಿಲ್ಲ. ಇನ್ನು ಈ ದುಃಖಗಳಿಂದ ಬಿಡುಗಡೆ ಇಲ್ಲವೆಂದಾದರೆ ಇವು ಬದುಕಿನ ಸೌಂದರ್ಯವನ್ನು ಸೃಷ್ಟಿಸಿಬಿಡುತ್ತವೆ. ಈ ಕಥೆಗಳ ಒಟ್ಟು ಪಾಡು ಹಾಡಾದ ಬಗೆ ಇದು. ಇಲ್ಲಿನ ಬಡ ಪಾತ್ರಗಳು ಅದೆಷ್ಟು ಶ್ರೀಮಂತವಾಗಿವೆ ಎನಿಸುತ್ತದೆ. ತಮಗೆ ಸಿಕ್ಕ ಅಂಕುಡೊಂಕಾದ ಏಕತಾರಿಯಿಂದಲೇ ಅಗೋಚರ ರಾಗಗಳನ್ನು ಹೊಮ್ಮಿಸಿವೆ. ಬದುಕಿನ ವಿಚಿತ್ರ ಒತ್ತಡದಲ್ಲಿ ಸಿಲುಕಿರುವ ಈ ಪಾತ್ರಗಳು ಬದುಕಲು ತೋರುವ ತ್ರಾಣವೇ ಇಲ್ಲಿನ ದರ್ಶನ. ಇವುಗಳ ಮುಗ್ಧತೆ ಮತ್ತು ವಿಕ್ಷಿಪ್ತತೆಯೇ ಇಲ್ಲಿನ ಆಸ್ತಿ. ಇವು ಮಾಡುವ ದುಸ್ಸಾಹಸಗಳೇ ಬದುಕಿನ ಭರವಸೆ. ಮುಂದೆ ಸಾಗುತ್ತಾ ಹೋಗುವ ಅದೃಷ್ಟದ ಅಗತ್ಯ ಇವಕ್ಕಿಲ್ಲ. ಅಡ್ಡಡ್ಡ ಹಾಯುತ್ತ ದುರ್ಗಮ ಹಾದಿಗಳಲ್ಲಿ ಪಯಣಿಸಿವೆ. ಇವುಗಳಿಗು ಕೂಡ ಬದುಕೆಂಬುದು ಒಂದು ನಿರಂತರ ಭರವಸೆ. ಅರೆ! ಹೌದಲ್ಲವೆ ಕಥೆಗಾರನಿಗೂ ಕಥೆ ಎಂಬುದು ನಿರಂತರ ಭರವಸೆಯೆ. ಈ ದಾರಿಯಲ್ಲಿ ಶಶಿ ತರೀಕೆರೆ ಮೂಡಿಸಿದ ಹೆಜ್ಜೆ ಗುರುತು ಸಾಮಾನ್ಯವಾದುದಲ್ಲ. ಎಲ್ಲೂ ದಣಿಯದ ಅವರ ಕಥನ ಕಲೆ ಕನ್ನಡ ಗದ್ಯದ ಭರವಸೆಯೂ ಹೌದು.- ವಿಕ್ರಮ ವಿಸಾಜಿA Kannada book by Chanda Pustaka / ಛಂದ ಪುಸ್ತಕದ ಪ್ರಕಟಣೆ
Piracy-free
Assured Quality
Secure Transactions
Delivery Options
Please enter pincode to check delivery time.
*COD & Shipping Charges may apply on certain items.